ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಹಾಸನಕ್ಕೆ ಸುಸ್ವಾಗತ

ಈ ಸಂಸ್ಥೆಯು ಹಾಸನ ಜಿಲ್ಲೆಯಲ್ಲಿ 1983 ರಂದು ಆರಂಭಗೊಂಡ ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹಾಸನದ ಹೃದಯ ಭಾಗದಲ್ಲಿ 1.04 ಎಕರೆ ವಿಸ್ತಿರ್ಣದ ಭೂಪ್ರದೇಶದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಆಶಾಕಿರಣವಾಗಿದೆ. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಹಾಸನ “ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ “ಇದರ ಮಾನ್ಯತೆ ಪಡೆದಿರುವ ಸರ್ಕಾರಿ ಸಂಸ್ಥೆಯಾಗಿದ್ದು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ಅಧೀನದಲ್ಲಿರುತ್ತದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರಿಗೆ ಡಿಪ್ಲೋಮ ಪ್ರೊಗ್ರಾಮ್ ಅನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ.

* ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗ * ವಾಣಿಜ್ಯ ಅಭ್ಯಾಸ ವಿಭಾಗ * ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ನಿರ್ವಹಣಾ ವಿಭಾಗ * ಉಡುಪು ವಿನ್ಯಾಸ ಮತ್ತು ಫ್ಯಾಷನ್ ತಂತ್ರಜ್ಞಾನ ವಿಭಾಗ ಅರ್ಹ, ನುರಿತ ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸದಾ ಕಾರ್ಯನಿರತರಾಗಿರುತ್ತಾರೆ. ಸುಸಜ್ಜಿತ ಪ್ರಯೋಗಾಲಯಗಳನ್ನು ಈ ಸಂಸ್ಥೆ ಹೊಂದಿರುತ್ತದೆ. ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಸೌಲಭ್ಯಗಳು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸ್ವ-ಉದ್ಯೋಗದ ಅವಕಾಶಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದೆ.

ಕಾಲೇಜು ಕಿರು ಚಿತ್ರಣ

ಕ್ಯಾಂಪಸ್ ಪ್ರವಾಸವನ್ನು ತೆಗೆದುಕೊಳ್ಳಿ